Gruhalakshmi status check online : ಗೃಹ ಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣ ಬಿಡುಗಡೆ, ನಿಮಗೆ ಹಣ ಜಮ ಆಗಿದೆಯಾ ಹೀಗೆ ಚೆಕ್ ಮಾಡಿ!
Gruhalakshmi status check : ನಮಸ್ಕಾರ ಸ್ನೇಹಿತರೇ, ನಮ್ಮ ಮಾಧ್ಯಮಕ್ಕೆ ಭೇಟಿ ನೀಡಿ ಲೇಖನವನ್ನು ಓದುತ್ತಿರುವ ತಮಗೆಲ್ಲ ಸ್ವಾಗತ. ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಕಳೆದ ಎರಡು ತಿಂಗಳಿಂದ ಗೃಹ ಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಖಾತೆಗೆ ಜಮಾ ಆಗುತ್ತಿಲ್ಲ. ಈ ಕಾರಣಕ್ಕಾಗಿ ರಾಜ್ಯದಲ್ಲಿ ಹಲವು ಮಹಿಳೆಯರು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ, ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇದಕ್ಕೆ ಉತ್ತರವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟನೆ ನೀಡಿದ್ದಾರೆ. ಗೃಹ ಲಕ್ಷ್ಮಿ ಯೋಜನೆ ಹಣ ಯಾವಾಗ ಜಮ ಆಗುತ್ತದೆ ಅನ್ನುವುದರ ಬಗ್ಗೆ ಮಾಹಿತಿ ತಿಳಿಸಿದ್ದಾರೆ. ಅದರ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರಣೆ.
ಹೌದು ಸ್ನೇಹಿತರೆ ಗೃಹ ಲಕ್ಷ್ಮಿ ಯೋಜನೆಯ ಜೂನ್ ಮತ್ತು ಜುಲೈ ತಿಂಗಳ ಹಣವನ್ನು ಮಹಿಳೆಯರ ಖಾತೆಗೆ DBT ಮೂಲಕ ಜಮ ಮಾಡಲು ಸರ್ಕಾರವು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಹಣವನ್ನು ಇನ್ನು 10 ದಿನಗಳ ಒಳಗೆ ಅಂದರೆ ಆಗಸ್ಟ್ ಮೊದಲನೆಯ ವಾರ ಮುಗಿಯುವುದರ ಒಳಗೆ ಎಲ್ಲಾ ಮಹಿಳೆಯರಿಗೆ ಹಣ ಜಮ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ. ಇದಕ್ಕೆ ಮುಖ್ಯ ಮಂತ್ರಿಗಳಾದ ಸಿದ್ಧರಾಮಯ್ಯ ಅವರು ಕೂಡ ಪ್ರತಿಕ್ರಿಯೆ ನೀಡಿದ್ದು, ಅದರ ಮಾಹಿತಿ ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿರಿ.
ಸ್ನೇಹಿತರೆ ಈ ಲೇಖನದ ಮೂಲಕ ನಿಮಗೆ ಗೃಹ ಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್ ಏನು, ಗೃಹ ಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣ ಯಾವಾಗ ಜಮ ಆಗುತ್ತದೆ, ಗೃಹ ಲಕ್ಷ್ಮಿ ಯೋಜನೆಯ ಜೂನ್ ಮತ್ತು ಜುಲೈ ತಿಂಗಳ ಹಣ ಯಾವಾಗ ಜಮ ಆಗುತ್ತದೆ, ನಿಮ್ಮ ಹಣ ಪೆಂಡಿಂಗ್ ಇದ್ದರೆ ಏನು ಮಾಡಬೇಕು, ನಿಮಗೆ ಹಣ ಬಂದಿದೆಯಾ? ಇಲ್ಲವಾ? ಎಂದು ನಿಮ್ಮ ಮೊಬೈಲ್ ಮೂಲಕ ಹೇಗೆ ಚೆಕ್ ಮಾಡಬೇಕು ಎನ್ನುವ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. ಇದೆಲ್ಲದರ ಬಗ್ಗೆ ಮಾಹಿತಿ ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿರಿ.
ನೀವೇನಾದರೂ ನಮ್ಮ ಮಾಧ್ಯಮವನ್ನು ಫಾಲೋ ಮಾಡಿಕೊಂಡು, ಪ್ರತಿ ದಿನ ನಮ್ಮ ಮಾಧ್ಯಮಕ್ಕೆ ಭೇಟಿ ನೀಡಿದರೆ ನಿಮಗೆ ನಾವು ಲೇಖನಗಳ ಮೂಲಕ ಕಾಂಗ್ರೆಸ್ ನ ಎಲ್ಲಾ ಗ್ಯಾರಂಟೀ ಯೋಜನೆಗಳ ಬಗ್ಗೆ ಹೊಸ ಅಪ್ಡೇಟ್ ನೀಡುತ್ತೇವೆ, ಗ್ಯಾರಂಟೀ ಯೋಜನೆಗಳಿಗೆ ತಂದಿರುವ ಹೊಸ ರೂಲ್ಸ್ ಬಗ್ಗೆ ಮಾಹಿತಿ ನೀಡುತ್ತೇವೆ. ಸರ್ಕಾರವು ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡಲು ನೀಡುವ ಹಲವು ಯೋಜನೆಗಳಾದ ಉಜ್ವಲ್ ಯೋಜನೆ, ಪಿಎಂ ವಿಶ್ವಕರ್ಮ ಯೋಜನೆ, ಪಿಎಂ ಆವಾಸ್ ಯೋಜನೆ, ಪಿಂಚಣಿ ಯೋಜನೆ, ಮುಂತಾದವುಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಅದ್ದರಿಂದ ನಮ್ಮ ಮಾಧ್ಯಮವನ್ನು ತಪ್ಪದೆ ಫಾಲೋ ಮಾಡಿಕೊಳ್ಳಿ.
ಇದರ ಜೊತೆಗೆ ನಮ್ಮ ಮಾಧ್ಯಮದಲ್ಲಿ ನಿಮಗೆ ವಿಧ್ಯಾರ್ಥಿಗಳಿಗೆ ಸಂಬಂಧ ಪಟ್ಟ ಸರ್ಕಾರವು ವಿಧ್ಯಾರ್ಥಿಗಳಿಗೆ ನೀಡುವ ವಿಧ್ಯಾಭ್ಯಾಸದ ಸ್ಕಾಲರ್ಷಿಪ್ ಬಗ್ಗೆ ಮಾಹಿತಿ ನೀಡುತ್ತೇವೆ, ವಿಧ್ಯಾರ್ಥಿಗಳ ಎಕ್ಸಾಮ್ ಡೇಟ್, ಎಕ್ಸಾಮ್ ರಿಸಲ್ಟ್ ಬಗ್ಗೆ ಮಾಹಿತಿ ನೀಡುತ್ತೇವೆ. ನೀವೇನಾದರೂ ಹೊಸ ಹುದ್ದೆಗಳಿಗೆ ಹುಡುಕುತ್ತಿದ್ದರೆ ಸರ್ಕಾರವು ಖಾಲಿ ಇರುವ ಹುದ್ದೆಗಳ ಭರ್ತಿ ಮಾಡುವ ಸಲುವಾಗಿ ಹೊರಡಿಸುವ ಅಧಿಸೂಚನೆಯ ಬಗ್ಗೆ ಮಾಹಿತಿ ನೀಡುತ್ತೇವೆ. ಇದಷ್ಟೇ ಅಲ್ಲದೇ ರೈತರಿಗಾಗಿ ಸರ್ಕಾರಗಳು ತಂದಿರುವ ಬೆಳೆ ಸಾಲ ಮನ್ನಾ ಮಾಡುವ ಯೋಜನೆ, ಬೆಳೆ ವಿಮೆ ನೋಂದಣಿ ಯೋಜನೆ, ಬೆಳೆ ಪರಿಹಾರ ಯೋಜನೆ, ಪಿಎಂ ಕಿಸಾನ್ ಯೋಜನೆ, ಮುಂತಾದವುಗಳ ಅರ್ಜಿ ಹೇಗೆ ಹಾಕಬೇಕು ಮತ್ತು ಈ ಎಲ್ಲಾ ಯೋಜನೆಗಳ ಲಾಭ ಹೇಗೆ ಪಡೆಯಬೇಕು ಅನ್ನುವ ಮಾಹಿತಿ ನಮ್ಮ ಲೇಖನದಲ್ಲಿ ನೀಡುತ್ತೇವೆ. ಈ ಎಲ್ಲಾ ಮಾಹಿತಿಗಳ ಪಡೆಯಲು WhatsApp group ಹಾಗೂ Telegram group ಗಳ ಸೇರಿಕೊಳ್ಳಿರಿ.

(Gruhalakshmi status check) ಗೃಹ ಲಕ್ಷ್ಮಿ ಯೋಜನೆ ವಿವರ :
ಸ್ನೇಹಿತರೆ ನಮ್ಮೆಲ್ಲರಿಗೂ ಮೊದಲೇ ಗೊತ್ತಿರುವ ಹಾಗೆ ಗೃಹ ಲಕ್ಷ್ಮಿ ಯೋಜನೆಯನ್ನು ಕಾಂಗ್ರೆಸ್ ಸರ್ಕಾರವೂ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಜಾರಿಗೆ ತಂದಿದೆ. ಕಾಂಗ್ರೆಸ್ ಸರ್ಕಾರವು ಹಿಂದಿನ ವಿಧಾನ ಸಭಾ ಚುನಾವಣೆ ಪೂರ್ವದಲ್ಲಿ, ನಾವೇನಾದರೂ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟೀ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದ್ದರು. ಆದ ಕಾರಣ ಜನರು ಕೂಡ ಈ ಗ್ಯಾರಂಟೀ ಯೋಜನೆಗಳ ಲಾಭ ಪಡೆಯಬೇಕು ಎಂದು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದರು. ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಸರ್ಕಾರವು ನೀಡಿದ ಮಾತಿನ ಹಾಗೆ ಐದು ಗ್ಯಾರಂಟೀ ಯೋಜನೆಗಳನ್ನು ಒಂದೊಂದಾಗಿ ಜಾರಿಗೆ ತಂದಿತು. ಈ ಐದು ಗ್ಯಾರಂಟೀಗಳಲ್ಲಿ ಒಂದಾದ ಯೋಜನೆ ಗೃಹ ಲಕ್ಷ್ಮಿ ಯೋಜನೆ. ಈ ಯೋಜನೆಯ ಮೂಲಕ ರಾಜ್ಯದಲ್ಲಿನ ಪ್ರತಿ ಕುಟುಂಬದ ಮುಖ್ಯ ಮಹಿಳೆಯರಿಗೆ, ಪ್ರತಿ ತಿಂಗಳು ₹2000 ಹಣವನ್ನು ನೀಡಲಾಗುತ್ತದೆ.
ಹೌದು ಗೆಳೆಯರೇ ಮೇಲೆ ಹೇಳಿದ ಹಾಗೆ ಗೃಹ ಲಕ್ಷ್ಮಿ ಯೋಜನೆಯ ಮೂಲಕ ಪ್ರತಿ ತಿಂಗಳು ಮಹಿಳೆಯರಿಗೆ ₹2000 ರೂಪಾಯಿ ಹಣವನ್ನು ಉಚಿತವಾಗಿ ನೀಡಲಾಗುತ್ತದೆ. ಈ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ನೀಡಿದ ಐದು ಗ್ಯಾರಂಟೀ ಯೋಜನೆಗಳಲ್ಲಿ ಪ್ರಮುಖವಾದುದು ಆಗಿದೆ. ಈ ಯೋಜನೆಯನ್ನು ಜಾರಿಗೆ ತಂದಾಗಿನಿಂದ ಇಲ್ಲಿಯವರೆಗೆ ಕಾಂಗ್ರೆಸ್ ಸರ್ಕಾರವು ಅಚ್ಚುಕಟ್ಟಾಗಿ ಯೋಜನೆಯನ್ನು ಮುಂದುವರಿಸುತ್ತಿದೆ. ಇಲ್ಲಿಯ ವರೆಗೆ ಒಟ್ಟು 24 ಕಂತುಗಳ ಗೃಹ ಲಕ್ಷ್ಮಿ ಯೋಜನೆಯ ಹಣ ರಾಜ್ಯದ ಎಲ್ಲ ಫಲಾನುಭವಿ ಮಹಿಳೆಯರಿಗೆ ಜಮ ಆಗಿದೆ. ಆದರೆ ಕಳೆದ ಎರಡು ತಿಂಗಳಿಂದ ಗೃಹ ಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಖಾತೆಗೆ ಜಮಾ ಆಗುತ್ತಿಲ್ಲ. ಯಾಕೆ ಗೃಹ ಲಕ್ಷ್ಮಿ ಯೋಜನೆಯ ಹಣ ಜಮ ಆಗುತ್ತಿಲ್ಲ, ಯಾವಾಗ ಹಣ ಜಮ ಆಗುತ್ತದೆ ಎನ್ನುವ ಮಾಹಿತಿ ಕೆಳಗೆ ನೀಡಲಾಗಿದೆ.
(Gruhalakshmi status check) ಜೂನ್ ಮತ್ತು ಜುಲೈ ತಿಂಗಳ ಹಣ ಯಾವಾಗ ಜಮ :
ಹೌದು ಸ್ನೇಹಿತರೆ ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಗೃಹ ಲಕ್ಷ್ಮಿ ಯೋಜನೆಯ 25 ನೆಯ ಕಂತಿನ ಹಣ ಇನ್ನು ಮಹಿಳೆಯರಿಗೆ ಜಮ ಆಗಿಲ್ಲ. ಆದ ಕಾರಣ ಈ ಹಣ ಯಾವಾಗ ಜಮ ಆಗುತ್ತದೆ ಎಂದು ಮಹಿಳೆಯರು ಕಾಯುತ್ತಿದ್ದಾರೆ. ತಮ್ಮ ಬ್ಯಾಂಕ್ ಖಾತೆಗಳನ್ನು ತೆಗೆದುಕೊಂಡು ಪ್ರತಿ ದಿನ ಬ್ಯಾಂಕ್ ಗಳಿಗೆ ಅಲೆಯುತ್ತಿದ್ದಾರೆ. ಹಣ ಜಮ ಆಗದೇ ಇರುವುದನ್ನು ಕಂಡು ನಿರಾಶೆಯಿಂದ ಕಾಂಗ್ರೆಸ್ ಸರ್ಕಾರಕ್ಕೆ ನಿಂದಿಸುತ್ತಿದ್ದಾರೆ. ಆದ ಕಾರಣ ಇದನ್ನು ಗಮನಿಸಿದ ಸಚಿವರು ಇದಕ್ಕೆ ಈ ಕೆಳಗೆ ನೀಡಿದ ಹಾಗೆ ಪ್ರತಿ ಕ್ರಿಯೆ ನೀಡಿದ್ದಾರೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹ ಲಕ್ಷ್ಮಿ ಯೋಜನೆಯ ಪೆಂಡಿಂಗ್ ಇರುವ 25 ನೆಯ ಕಂತಿನ ಹಣದ ಬಗ್ಗೆ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ” ಗೃಹ ಲಕ್ಷ್ಮಿ ಯೋಜನೆಯ 25 ನೆಯ ಕಂತಿನ ಹಣವನ್ನು ಇನ್ನು 10 ದಿನಗಳಲ್ಲಿ ಅರ್ಹ ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತದೆ” ಎಂದು ತಿಳಿಸಿದ್ದಾರೆ. ಅಂದರೆ ಮುಂದಿನ ಆಗಸ್ಟ್ ಮೊದಲನೆಯ ವಾರದಲ್ಲಿ ಹಣ ಜಮ ಆಗುತ್ತದೆ. ಅದ್ದರಿಂದ ಕಾದುನೋಡಬೇಕಿದೆ.
ಪೆಂಡಿಂಗ್ ಇರುವ ಗೃಹ ಲಕ್ಷ್ಮಿ ಹಣ ಪಡೆಯುವುದು ಹೇಗೆ?
ಸ್ನೇಹಿತರೆ ನಮಗೆ ಗೊತ್ತಿರುವ ಹಾಗೆ ಗೃಹ ಲಕ್ಷ್ಮಿ ಯೋಜನೆಯನ್ನು ರಾಜ್ಯದಲ್ಲಿನ ಬಡ ಕುಟುಂಬಕ್ಕೆ ಸೇರಿದ ಮಹಿಳೆಯರನ್ನು ಆರ್ಥಿಕವಾಗಿ ಸದೃಢ ಮಾಡಬೇಕು, ಮಹಿಳೆಯರಿಗೆ ಕುಟುಂಬ ನಡೆಸಲು ಸಹಾಯ ಮಾಡಬೇಕು ಅನ್ನುವ ಉದ್ದೇಶದಿಂದ ಗೃಹ ಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಅದ್ದರಿಂದ ಸರ್ಕಾರವು ಈ ಯೋಜನೆಯ ಹಣ ಪಡೆಯಲು ಕೆಲವು ಅರ್ಹತೆಗಳನ್ನು ಮತ್ತು ರೂಲ್ಸ್ ಅನ್ನು ಜಾರಿ ಮಾಡಿದೆ. ಆವುಗಳನ್ನು ಕೆಳಗೆ ನೀಡಲಾಗಿದೆ.
ಬ್ಯಾಂಕ್ ಖಾತೆ ಸರಿಮಾಡಿಕೊಳ್ಳಿ : ಹೌದು ಸ್ನೇಹಿತರೆ ನಿಮಗೇನಾದರೂ ಗೃಹ ಲಕ್ಷ್ಮಿ ಯೋಜನೆಯ ಹಣ ಬರುತ್ತಿಲ್ಲ ಅಂದರೆ, ಮೊದಲು ನಿಮ್ಮ ಬ್ಯಾಂಕ್ ಖಾತೆಗೆ ಭೇಟಿ ನೀಡಿ ನಿಮ್ಮ ಖಾತೆ ಚಾಲ್ತಿಯಲ್ಲಿದೆಯಾ? ಎಂದು ಪರಿಶೀಲಿಸಿ ಮತ್ತು ನಿಮ್ಮ ಬ್ಯಾಂಕ್ ಖಾತೆಗೆ KYC ಅನ್ನು ಮಾಡಿಸಿ.
ರೇಷನ್ ಕಾರ್ಡ್ ಅಪ್ಡೇಟ್ : ಸ್ನೇಹಿತರೆ ನಿಮಗೆ ಗೃಹ ಲಕ್ಷ್ಮಿ ಯೋಜನೆಯ ಹಣ ಬರುತ್ತಿಲ್ಲ ಅಂದರೆ ನಿಮ್ಮ ರೇಷನ್ ಕಾರ್ಡ್ ಅಲ್ಲಿರುವ ಎಲ್ಲಾ ಸದಸ್ಯರ KYC ಆಗಿದೆಯಾ ಎಂದು ಪರಿಶೀಲಿಸಿ, ಆಗಿಲ್ಲ ಅಂದರೆ ಮಾಡಿಸಿ. ಇದರ ಜೊತೆಗೆ ನಿಮ್ಮ ಕುಟುಂಬದಲ್ಲಿ ಯಾರಾದರೂ ಇತ್ತೀಚಿಗೆ ತೀರಿಹೋಗಿದ್ದರೆ, ನೀವು ನಿಮ್ಮ ರೇಷನ್ ಕಾರ್ಡ್ ನಿನ್ಡ್ ಅವರ ಹೆಸರು ತೆಗೆದು ಹಾಕಿಲ್ಲ ಅಂದರೆ ಮೊದಲು ತೆಗೆದುಹಾಕಿ.
ಆಧಾರ್ ಕಾರ್ಡ್ ಅಪ್ಡೇಟ್ : ನಿಮ್ಮ ರೇಷನ್ ಕಾರ್ಡ್ ನ ಮುಖ್ಯ ಮಹಿಳೆಯ ಆಧಾರ್ ಕಾರ್ಡ್ ಹತ್ತು ವರ್ಷದಿಂದ ಅಪ್ಡೇಟ್ ಮಾಡಿಸಿಲ್ಲ ಅಂದರು ನಿಮಗೆ ಹಣ ಬರುವುದಿಲ್ಲ. ಅದಕ್ಕೆ ಅದನ್ನು ಅಪ್ಡೇಟ್ ಮಾಡಿಸುವುದು ಕಡ್ಡಾಯ.
ದಾಖಲಾತಿಗಳಲ್ಲಿ ಹೆಸರು ಬದಲಾಗಿರುವುದು : ಹೌದು ಸ್ನೇಹಿತರೆ ನಿಮ್ಮ ರೇಷನ್ ಕಾರ್ಡ್ ನ ಮುಖ್ಯ ಮಹಿಳೆಯ ಹೆಸರು ಆಧಾರ್ ಕಾರ್ಡ್ ಅಲ್ಲಿ ಬೇರೆ, ರೇಷನ್ ಕಾರ್ಡ್ ಅಲ್ಲಿ ಬೇರೆ ಮತ್ತು ಬ್ಯಾಂಕ್ ಪಾಸ್ ಬುಕ್ ಅಲ್ಲಿ ಬೇರೆ ಇದ್ದರೆ ನಿಮಗೆ ಹಣ ಜಮ ಆಗಲ್ಲ. ಆದ ಕಾರಣ ಈ ಎಲ್ಲಾ ದಾಖಲತಿಗಳಲ್ಲಿ ಹೆಸರು ಸರಿಯಾಗಿ ಮಾಡಿಸಿ.
ಸೂಚನೆ : ಮೇಲಿನ ಎಲ್ಲಾ ಕೆಲಸವನ್ನು ಮಾಡಿದ್ದೀರಾ, ಆದರೂ ಹಣ ಜಮ ಆಗಿಲ್ಲ ಅಂದೆ ನೀವು ಅರ್ಜಿ ಹಾಕುವ ಸಮಯದಲ್ಲಿ ಏನಾದರೂ ತಪ್ಪಾಗಿರುತ್ತದೆ. ಅದ್ದರಿಂದ ಅದನ್ನು ಚೆಕ್ ಮಾಡಿಸಲು ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ. ಅವರು ನಿಮಗೆ ಎಲ್ಲಾ ಮಾಹಿತಿ ನೀಡುತ್ತಾರೆ.
ಗೃಹ ಲಕ್ಷ್ಮಿ ಯೋಜನೆ ಹಣ ಜಮ ಆಗಿದೆ ಎಂದು ಹೇಗೆ ಚೆಕ್ ಮಾಡಬೇಕು?
ಸ್ನೇಹಿತರೆ ನಿಮಗೆ ಅಂದರೆ ನಿಮ್ಮ ಕುಟುಂಬದ ಮುಖ್ಯ ಮಹಿಳೆಯ ಖಾತೆಗೆ ಗೃಹ ಲಕ್ಷ್ಮಿ ಯೋಜನೆಯ ಹಣ ಜಮ ಆಗಿದೆಯಾ ಎಂದು ತಿಳಿಯಲು ನೀವು ಮಹಿಳೆಯ ಖಾತೆ ಇರುವ ಬ್ಯಾಂಕ್ ಹತ್ತಿರವಿದ್ದರೆ ನೇರವಾಗಿ ಬ್ಯಾಂಕ್ ಗೆ ಭೇಟಿ ನೀಡಿ ಚೆಕ್ ಮಾಡಿಸಬಹುದು. ಇಲ್ಲ ಬ್ಯಾಂಕ್ ದೂರ ಇದ್ದರೆ ಈ ಕೆಳಗೆ ನೀಡಿದ ಲಿಂಕ್ ಮೇಲೆ ಒತ್ತಿ.
ಗೃಹ ಲಕ್ಷ್ಮಿ ಹಣದ ಸ್ಟೇಟಸ್ ಚೆಕ್ ಮಾಡಲು ಇಲ್ಲಿ ಒತ್ತಿ.
ಈ ಮೇಲೆ ನೀಡಿದ ಕರ್ನಾಟಕ ಸರ್ಕಾರದ DBT ಆ್ಯಪ್ ಡೌನ್ಲೋಡ್ ಮಾಡಿ, ನಿಮ್ಮ ಆಧಾರ್ ನಂಬರ್ ಮೂಲಕ ರೆಜಿಸ್ಟರ್ ಮಾಡಿಕೊಂಡು, ಅಲ್ಲಿ ನಿಮಗೆ ಗೃಹ ಲಕ್ಷ್ಮಿ ಯೋಜನೆಯ ಕಂತಿನ ಹಣ ಎಸ್ಟು ಜಮ ಆಗಿದೆ ಎಂದು ಚೆಕ್ ಮಾಡಬಹುದು.
ಸ್ನೇಹಿತರೆ ಗೃಹ ಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣ ಯಾವಾಗ ಜಮ ಆಗುತ್ತದೆ ಮತ್ತು ಪೆಂಡಿಂಗ್ ಹಣ ಪಡೆಯಲು ಏನು ಮಾಡಬೇಕು ಹಾಗೂ ಹಣ ಜಮ ಆಗಿರುವುದನ್ನು ಹೇಗೆ ಚೆಕ್ ಮಾಡಬೇಕು ಎಂದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿದ್ದೇನೆ ಎಂದು ಭಾವಿಸುತ್ತೇನೆ. ಧನ್ಯವಾದಗಳು..
ರೈತರಿಗಾಗಿ ಸರ್ಕಾರಗಳು ತಂದಿರುವ ಬೆಳೆ ಸಾಲ ಮನ್ನಾ ಮಾಡುವ ಯೋಜನೆ, ಬೆಳೆ ವಿಮೆ ನೋಂದಣಿ ಯೋಜನೆ, ಬೆಳೆ ಪರಿಹಾರ ಯೋಜನೆ, ಪಿಎಂ ಕಿಸಾನ್ ಯೋಜನೆ, ಮುಂತಾದವುಗಳ ಅರ್ಜಿ ಹೇಗೆ ಹಾಕಬೇಕು ಮತ್ತು ಈ ಎಲ್ಲಾ ಯೋಜನೆಗಳ ಲಾಭ ಹೇಗೆ ಪಡೆಯಬೇಕು ಅನ್ನುವ ಮಾಹಿತಿ ನಮ್ಮ ಲೇಖನದಲ್ಲಿ ನೀಡುತ್ತೇವೆ. ಈ ಎಲ್ಲಾ ಮಾಹಿತಿಗಳ ಪಡೆಯಲು WhatsApp group ಹಾಗೂ Telegram group ಗಳ ಸೇರಿಕೊಳ್ಳಿರಿ.