Free gas cylinder aplication : ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಅರ್ಜಿ ಆರಂಭ. ಗ್ಯಾಸ್ ಸಿಲಿಂಡರ್ ಗೆ ಹೇಗೆ ಅರ್ಜಿ ಹಾಕಬೇಕು?
Free gas cylinder aplication : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ. ಈ ಲೇಖನದ ಮೂಲಕ ನಾವು ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ನೀಡಲಾದ ಹೊಸ ಸಿಹಿ ಸುದ್ದಿಯ ಬಗ್ಗೆ ಮಾಹಿತಿಯನ್ನು ತಿಳಿಸುತ್ತಿದ್ದೇವೆ. ಆ ಸಿಹಿ ಸುದ್ದಿ ಏನಪ್ಪಾ ಅಂದರೆ, ಕೇಂದ್ರ ಸರ್ಕಾರವು ರಾಜ್ಯದಲ್ಲಿನ ಬಡ ಕುಟುಂಬದಲ್ಲಿನ ಮಹಿಳೆಯರಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ಅನ್ನು ನೀಡುತ್ತಿದೆ ಮತ್ತು ಗ್ಯಾಸ್ ಸಿಲಿಂಡರ್ ಅನ್ನು ತುಂಬಿಸಲು ಪ್ರತಿ ತಿಂಗಳು ಆರ್ಥಿಕ ನೆರವನ್ನು ಕೂಡ ನೀಡುತ್ತಿದೆ. ಈ ಯೋಜನೆಗೆ ಅರ್ಜಿ ಹಾಕಲು ಇನ್ನು ಅವಕಾಶವಿದ್ದು, ಈ ಯೋಜನೆಗೆ ಯಾರೆಲ್ಲ ಅರ್ಜಿ ಹಾಕಿ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು ಅನ್ನುವುದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ. ಅದ್ದರಿಂದ ನೀವು ಇನ್ನೂ ಈ ಯೋಜನೆಗೆ ಅರ್ಜಿ ಹಾಕಿಲ್ಲ ಅಂದರೆ ತಪ್ಪದೆ ಈ ಮಾಹಿತಿಯನ್ನು ಪೂರ್ತಿ ನೋಡಿ ಅರ್ಜಿಯನ್ನು ಹಾಕಿರಿ. ಅರ್ಜಿ ಹಾಕಲು ಬೇಕಾಗುವ ದಾಖಲೆಗಳ ಮಾಹಿತಿ ಕೆಳಗೆ ನೀಡಲಾಗಿದೆ.
ಹೌದು ಸ್ನೇಹಿತರೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವುದರ ಮೂಲಕ ನೀವು ಕೇಂದ್ರ ಸರ್ಕಾರದಿಂದ ಉಚಿತವಾಗಿ ಗ್ಯಾಸ್ ಸಿಲಿಂಡರ್ ಮತ್ತು ಸ್ಟೌವ್ ಪಡೆಯಬಹುದು. ಇದಲ್ಲದೆ ನೀವೇನಾದರೂ ಈ ಯೋಜನೆಯ ಮೂಲಕ ಉಚಿತವಾಗಿ ಗ್ಯಾಸ್ ಸಿಲೆಂಡರ್ ಪಡೆದರೆ, ಮುಂದೆ ನೀವು ಪ್ರತಿ ಬಾರಿ ಗ್ಯಾಸ್ ಸಿಲಿಂಡರ್ ಅನ್ನು ತುಂಬಿಸಿದಾಗ ಅದಕ್ಕೆ ಕೇಂದ್ರ ಸರ್ಕಾರವು ಸಬ್ಸಿಡಿ ಹಣವನ್ನು ನೀಡುತ್ತದೆ. ಹೀಗೆ ಸರ್ಕಾರ ನೀಡುವ ಸಬ್ಸಿಡಿ ಹಣ ಪಡೆಯುವ ಮೂಲಕ ನೀವು ಕೇವಲ ₹500 ರೂಪಾಯಿ ಅಲ್ಲಿ ಒಂದು ಗ್ಯಾಸ್ ಸಿಲಿಂಡರ್ ಅನ್ನು ತುಂಬಿಸಿಕೊಳ್ಳಬಹುದು. ಅದಕ್ಕಾಗಿ ಬಾರಿ ₹500 ರೂಪಾಯಿ ಅಲ್ಲಿ ನೀವು ಕೂಡ ಗ್ಯಾಸ್ ಸಿಲಿಂಡರ್ ಪಡೆಯಲು ಬಯಸಿದರೆ ಈ ಲೇಖನದಲ್ಲಿ ನೀಡಿದ ಯೋಜನೆಯ ಮಾಹಿತಿ ತಿಳಿಯಿರಿ. ಇದು ಯಾವ ಯೋಜನೆಯ ಮೂಲಕ ಪಡೆಯಬಹುದು, ಈ ಯೋಜನೆಗೆ ಅರ್ಜಿ ಹಾಕಲು ಅರ್ಹತೆಗಳೇನು, ಈ ಯೋಜನೆಗೆ ಅರ್ಜಿ ಹಾಕಲು ಬೇಕಾಗುವ ಡಾಕ್ಯುಮೆಂಟ್ಸ್ ಏನು ಮತ್ತು ಈ ಯೋಜನೆಗೆ ಅರ್ಜಿ ಹಾಕಿ, ಈ ಯೋಜನೆಯಿಂದ ಗ್ಯಾಸ್ ಸಿಲಿಂಡರ್ ಅನ್ನು ಅತಿ ಕಮ್ಮಿ ಬೆಲೆಗೆ ಹೇಗೆ ತೆಗೆದುಕೊಳ್ಳಬೇಕು ಅನ್ನುವುದರ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನೀವು ಪಡೆಯುತ್ತೀರಿ
ಪೋಸ್ಟ್ ಆಫೀಸ್ ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಸ್ನೇಹಿತರೆ ನಮ್ಮ ದೇಶದಲ್ಲಿ ಇನ್ನು ಹಲವು ಜನರಿಗೆ ಈ ಯೋಜನೆಯ ಬಗ್ಗೆ ಗೊತ್ತಿಲ್ಲ. ಈ ಯೋಜನೆಯ ಬಗ್ಗೆ ಗೊತ್ತಿಲ್ಲದವರಿಗೆ ನಮ್ಮ ಲೇಖನವನ್ನು ಶೇರ್ ಮಾಡಿ ಅಂತವರಿಗೆ ಉಪಯೋಗವಾಗುತ್ತದೆ. ನಮ್ಮ ರಾಜ್ಯದಲ್ಲಿ ಇನ್ನೂ ಹಲವು ಕುಟುಂಬಗಳು ಈ ಯೋಜನೆಯ ಬಗ್ಗೆ ಗೊತ್ತಿಲ್ಲದೆ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದಿದ್ದರೆ ದಾರಿಯಿಲ್ಲದೆ ಹೆಚ್ಚಿನ ಬೆಲೆಯಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಖರೀದಿಸಿ ಪ್ರತಿ ಬಾರಿ ತುಂಬಿಸಿಕೊಳ್ಳುತ್ತಿದ್ದಾರೆ ಮತ್ತು ಕೆಲವು ಕುಟುಂಬಗಳು ಗ್ಯಾಸ್ ಸಿಲಿಂಡರ್ ನ ಬೆಲೆ ಹೆಚ್ಚಾದ ಕಾರಣ ಗ್ಯಾಸ್ ಸಿಲಿಂಡರ್ ಬಳಸುವುದನ್ನೇ ಬಿಟ್ಟಿದ್ದಾರೆ. ಇಂತಹ ಬಡ ಕುಟುಂಬಗಳಿಗೆ ಗ್ಯಾಸ್ ಸಿಲಿಂಡರ್ ಖರೀದಿ ಮಾಡಲು ಮತ್ತು ಪ್ರತಿ ಬಾರಿ ತುಂಬಿಸಿಕೊಳ್ಳಲು ಆರ್ಥಿಕವಾಗಿ ನೆರವನ್ನು ನೀಡಬೇಕು ಅನ್ನುವ ಉದ್ದೇಶದಿಂದ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ ಅದು ಯಾವ ಯೋಜನೆ ಅನ್ನುವ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
ಈ ಲೇಖನದ ಮೂಲಕ ಗ್ಯಾಸ್ ಸಿಲಿಂಡರ್ ನ ಉಜ್ವಲ್ ಯೋಜನೆಯ ಬಗ್ಗೆ ಮಾಹಿತಿಯನ್ನು ನಿಮಗೆ ನೀಡಲಾಗಿದೆ. ಇದೆ ರೀತಿ ಪ್ರತಿ ದಿನ ಕೇಂದ್ರ ಸರ್ಕಾರದಿಂದ ಮತ್ತು ರಾಜ್ಯ ಸರ್ಕಾರದಿಂದ ನೀಡುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿ, ನೀವೆಲ್ಲ ಈ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ನಮ್ಮ ಮಾಧ್ಯಮವು ನಿಮಗೆ ಸಹಕರಿಸುತ್ತದೆ. ಈ ಯೋಜನೆಗಳ ಬಗ್ಗೆ ಮಾಹಿತಿ ನೀಡುವುದು ಅಷ್ಟೇ ಅಲ್ಲ, ಯೋಜನೆಗೆ ಹೇಗೆ ಅರ್ಜಿ ಹಾಕಿ ಯೋಜನೆಯಿಂದ ಲಾಭ ಪಡೆಯಬೇಕು ಎನ್ನುವ ಮಾಹಿತಿಯನ್ನು ತಿಳಿಸುತ್ತೇವೆ. ಅದಕ್ಕಾಗಿ ಸರ್ಕಾರದ ಹಲವು ಯೋಜನೆಗಳ ಮಾಹಿತಿ ಪಡೆದು ನೀವು ಕೂಡ ವಿವಿಧ ಸರ್ಕಾರಿ ಯೋಜನೆಗಳ ಲಾಭ ಪಡೆಯಬೇಕಾದರೆ ನಮ್ಮ ಮಧ್ಯಮವ ಫಾಲೋ ಮಾಡಿಕೊಳ್ಳಿ.
ಸ್ನೇಹಿತರೆ ನಿಮಗೆ ಸರ್ಕಾರವು ವಿಧ್ಯಾರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸ ಮುಂದುವರೆಸಲು ನೀಡುವ ಹಲವು ಸ್ಕಾಲರ್ಷಿಪ್ ಗಳ ಬಗ್ಗೆ ಮಾಹಿತಿ ಮತ್ತು ನಿಮಗೆ ಪ್ರತಿ ದಿನ ಸರ್ಕಾರದಿಂದ ಖಾಲಿ ಇರುವ ಹುದ್ದೆಗಳ ನೇಮಕಾತಿ ಮಾಡಲು ಹೊರಡಿಸುವ ಹೊಸ ಹುದ್ದೆಗಳ ಅಧಿಸೂಚನೆಯ ಬಗ್ಗೆ ಮಾಹಿತಿ ಮತ್ತು ಹುದ್ದೆಗಳ ಪೂರ್ತಿ ವಿವರ ಸುಲಭವಾಗಿ ತಿಳಿದುಕೊಳ್ಳಲು ತಪ್ಪದೆ ನಮ್ಮ ಮಾಧ್ಯಮವನ್ನು ಭೇಟಿ ನೀಡಿ. ಈ ಮಾಹಿತಿಗಳನ್ನು ಪಡೆಯಲು ನೀವು ಯಾವುದೇ ಹಣವನ್ನು ನೀಡಬೇಕಿಲ್ಲ, ಉಚಿತವಾಗಿ ಎಲ್ಲಾ ವಿಷಯಗಳ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಪಿಎಂ ಕಿಸಾನ್ ಯೋಜನೆ ಕುರಿತು, ಬೆಳೆ ವಿಮೆ ನೋಂದಣಿ ಮಾಡಿಕೊಳ್ಳುವ ಕುರಿತು ಮತ್ತು ಸರ್ಕಾರ ರೈತರಿಗೆ ನೀಡುವ ಬಿತ್ತನೆ ಬೀಜ, ರಸಗೊಬ್ಬರ, ರೈತರು ಉಳುಮೆಗೆ ಬಳಸುವ ಉಪಕರಣಗಳ ಸಬ್ಸಿಡಿಯ ಬಗ್ಗೆ ಮಾಹಿತಿ ನಿಮಗೆ ತಿಳಿಸುತ್ತೇವೆ. ಇವೆಲ್ಲಾ ವಿಷಯಗಳ ಕುರಿತು ಆಸಕ್ತಿ ಇದ್ದರೆ, ಈ ವಿಷಯಗಳ ಮಾಹಿತಿ ನಿಮಗೆ ಬೇಕಾಗಿದ್ದರೆ ನಮ್ಮ ಮಾಧ್ಯಮದ WhatsApp group ಹಾಗೂ Telegram group ಜಾಯಿನ್ ಮಾಡಿಕೊಳ್ಳಿರಿ.

(Free gas cylinder aplication) ಉಚಿತ ಗ್ಯಾಸ್ ಸಿಲಿಂಡರ್ ಅರ್ಜಿ :
ಸ್ನೇಹಿತರೆ, ನಮ್ಮ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಹಾಗೂ ನಗರ ಪ್ರದೇಶದ ಎಲ್ಲಾ ಮಹಿಳೆಯರೂ ಕೂಡ ಅಡುಗೆ ಮಾಡಲು ಗ್ಯಾಸ್ ಸಿಲಿಂಡರ್ ಅನ್ನು ಬಳಸುತ್ತಿದ್ದಾರೆ. ಯಾವ ಮಹಿಳೆಯರು ಕೂಡ ಕಟ್ಟಿಗೆಯ ಒಲೆಯ ಮೇಲೆ ಅಡುಗೆ ಮಾಡುವುದಿಲ್ಲ. ಅದ್ದರಿಂದ ದೇಶದಲ್ಲಿ ಗ್ಯಾಸ್ ಸಿಲಿಂಡರ್ ನ ಬೆಲೆ ಜಾಸ್ತಿಯಾಗಿದೆ. ಈ ಕಾರಣಕ್ಕಾಗಿ ದೇಶದಲ್ಲಿರುವ ಹಲವು ಬಡ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಗ್ಯಾಸ್ ಸಿಲಿಂಡರ್ ಖರೀದಿ ಮಾಡಲು ಆಗುತ್ತಿಲ್ಲ. ಅದ್ದರಿಂದ ಕೆಲವೊಂದು ಕುಟುಂಬದಲ್ಲಿ ಗ್ಯಾಸ್ ಸಿಲಿಂಡರ್ ಬಳಸುವುದನ್ನು ನಿಲ್ಲಿಸುತ್ತಿದ್ದಾರೆ. ಇಂತಹ ಕುಟುಂಬಗಳ ಈ ಪರಿಸ್ಥಿತಿಯನ್ನು ಗಮಸಿದ ಸರಕಾರವು, ಇಂತಹ ಕುಟುಂಬಗಳಿಗೆ ಗ್ಯಾಸ್ ಸಿಲಿಂಡರ್ ಅನ್ನು ತಲುಪಿಸಬೇಕು ಅನ್ನುವ ಒಂದು ಕಾರಣಕ್ಕೆ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಈ ಒಂದು ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯನ್ನು ಜಾರಿಗೆ ತರಲಾಯಿತು. ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
ಈ ಯೋಜನೆಯನ್ನು ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದಿದ್ದು, ಅಲ್ಲಿಂದ ಇಲ್ಲಿಯವರೆಗೆ ಈ ಯೋಜನೆಯನ್ನು ಮುಂದುವರೆಸಲಾಗುತ್ತಿದ್ದೆ. ಅದಲ್ಲದೆ ಈ ಬಾರಿ ಲೋಕ ಸಭಾ ಚುನಾವಣೆಯಲ್ಲಿ ಮತ್ತೆ ನರೇಂದ್ರ ಮೋದಿ ಅವರೇ ಅಧಿಕಾರಕ್ಕೆ ಬಂದ ಕಾರಣ ಈ ಯೋಜನೆಯ ಸೌಲಭಗಳನ್ನು ಇನ್ನು ಹೆಚ್ಚು ಮಾಡಬೇಕು ಮತ್ತು ಈ ಯೋಜನೆಯನ್ನು ಪ್ರತಿ ಕುಟುಂಬಕ್ಕೂ ತಲುಪುವಂತೆ ಮಾಡಬೇಕು ಎಂದು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಅದಕ್ಕಾಗಿ ನೀವೇನಾದರೂ ಇನ್ನು ಯೋಜನೆಗೆ ಅರ್ಜಿ ಹಾಕಿಲ್ಲ ಅಂದರೆ, ಇನ್ನು ಅವಕಾಶವಿದೆ. ಈಗಲೂ ಈ ಯೋಜನೆಗೆ ಅರ್ಜಿ ಹಾಕಿ, ಯೋಜನೆಯ ಲಾಭ ಪಡೆಯಬಹುದು. ಈ ಪ್ರಧಾನ ಮಂತ್ರಿ ಉಜ್ವಲ್ ಯೋಜನೆಗೆ ಅರ್ಜಿ ಹಾಕಲು ಬೇಕಾಗುವ ಮಾಹಿತಿ ಕೆಳಗೆ ನೀಡಲಾಗಿದೆ.
(Free gas cylinder aplication) ಪ್ರಧಾನ ಮಂತ್ರಿ ಉಜ್ವಲ್ ಯೋಜನೆ ವಿವರ :
ಹೌದು ಸ್ನೇಹಿತರೆ ದೇಶದಲ್ಲಿನ ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಹಿಳೆಯರಿಗೆ ನೆರವು ನೀಡಬೇಕು ಅನ್ನುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಉಜ್ವಲ್ ಯೋಜನೆಯನ್ನು ಜಾರಿಗೆ ತರಲಾಯಿತು. ಈ ಯೋಜನೆಯನ್ನು 2016 ರಲ್ಲಿ ಜಾರಿಗೆ ತರಲಾಗಿದ್ದು, ಈ ಯೋಜನೆಯ ಮೂಲಕ ದೇಶದಲ್ಲಿ ಈಗಾಗಲೇ ಹಲವು ಕುಟುಂಬಗಳು ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ ಪಡೆದು ಬಳಸುತ್ತಿವೆ.
ಸ್ನೇಹಿತರೆ ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಈ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ, ಹಳ್ಳಿಗಳಲ್ಲಿ ಬಡ ಕುಟುಂಬದ ಜನರು ಕಟ್ಟಿಗೆಗಳನ್ನು ತಂದು ಅಡುಗೆ ಮಾಡಬೇಕಿತ್ತು, ಇದರಿಂದ ಮಹಿಳೆಯರಿಗೆ ಬಹಳ ಕಷ್ಟಗಳು ಎದುರಾಗುತಿದ್ದವು. ಅವರಿಗೆ ಮಳೆಗಾಲದಲ್ಲಿ ಕಟ್ಟಿಗೆಗಳು ಸಿಗುತ್ತಿರಲಿಲ್ಲ, ಕತ್ತಿಗೆಗಳು ಸಿಕ್ಕರೂ ಕೂಡ ಅವುಗಳನ್ನು ಉರುವಲು ಬಹಳ ಶ್ರಮ ಪಡಬೇಕಿತ್ತು. ಇಶ್ಟೆಲ್ಲಾ ಮಾಡಿ ಕಟ್ಟಿಗೆಗಳನ್ನು ಉರುವುದರು ಅದರಿಂದ , ಅಂದರೆ ಕಟ್ಟಿಗೆಯ ಒಲೆಯಿಂದ ಬರುವ ಹೊಗೆಯು ಮಹಿಳೆಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬಿರುತಿತ್ತು. ಇದೆಲ್ಲವನ್ನು ಗಮನಿಸಿದ ಸರ್ಕಾರವು ಇವೆಲ್ಲಾ ಕಾರಣಗಳಿಗೆ ಪರಿಹಾರ ನೀಡುವ ಉದ್ದೇಶದಿಂದ 2016 ರಲ್ಲಿ ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯನ್ನು (Free gas cylinder aplication) ಜಾರಿಗೆ ತಂದಿತು.
ಕೆಲವು ಮಾಹಿತಿಗಳ ಪ್ರಕಾರ ಈ ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯ ಮುಖಾಂತರ ಇಲ್ಲಿಯ ತನಕ ದೇಶದ ಸುಮಾರು 10 ಮಿಲಿಯನ್ ಕುಟುಂಬಗಳ ಮಹಿಳೆಯರು ಈ ಯೋಜನೆಯ ಮೂಲಕ ಉಚಿತ ಗ್ಯಾಸ್ ಸಿಲಿಂಡರ್ ಪಡೆದು, ಪ್ರತಿ ಬಾರಿ ತುಂಬಿದಾಗ ನೀಡುವ ಸಬ್ಸಿಡಿ ಹಣವನ್ನು ಪಡೆಯುತ್ತಿದ್ದಾರೆ. ಈ ಯೋಜನೆಗೆ ಅರ್ಜಿ ಹಾಕಲು ಇನ್ನು ಅವಕಾಶವಿದ್ದು, ನೀವೇನಾದರೂ ಇನ್ನು ಈ ಯೋಜನೆಗೆ ಅರ್ಜಿ ಹಾಕಿಲ್ಲ ಅಂದರೆ ಕೆಳಗೆ ನೀಡಿದ ಎಲ್ಲಾ ಮಾಹಿತಿ ಓದಿಕೊಂಡು ತಪ್ಪದೆ ಅರ್ಜಿ ಹಾಕಿ, ಯೋಜನೆಯ ಲಾಭವನ್ನು ಪಡೆಯಿರಿ. ಈ ಯೋಜನೆಗೆ ಅರ್ಜಿ ಹಾಕಿ, ಯೋಜನೆಯ ಲಾಭವನ್ನು ಪಡೆಯಲು ಕೆಲವೊಂದು ಅರ್ಹತೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು ಅದರ ವಿವರಣೆ ಇಲ್ಲಿ ಇದೆ.
(Free gas cylinder aplication) ಗ್ಯಾಸ್ ಸಿಲಿಂಡರ್ ಗೆ ಅರ್ಜಿ ಹಾಕಲು ಇರಬೇಕಾದ ಅರ್ಹತೆಗಳು :
ಸ್ನೇಹಿತರೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಹಾಕಿ ಉಚಿತವಾಗಿ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ ಪಡೆದುಕೊಳ್ಳಬೇಕಾದರೆ ಕೇಂದ್ರ ಸರ್ಕಾರವು ಕೆಲವೊಂದು ಅರ್ಹತೆಗಳನ್ನು ನಿಗದಿಪಡಿಸಿದೆ. ಅವುಗಳನ್ನು ಕೆಳಗೆ ನೀಡಲಾಗಿದೆ..
1. ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಹಾಕಲು ಮಹಿಳೆಯರಿಗೆ ಮಾತ್ರ ಅವಕಾಶ ನೀಡಲಾಗಿದೆ .
2. ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಹಾಕಲು ಮಹಿಳೆಯ ವಯಸ್ಸು 18 ದಾಟಬೇಕು.
3. ಪ್ರಧಾನಮಂತ್ರಿ ಉಜ್ವಲ್ ಯೋಜನೆಗೆ ಅರ್ಜಿ ಹಾಕಲು ಮಹಿಳೆಯು ಭಾರತವರಾಗಿರಬೇಕು.
4. ಈ ಈ ಯೋಜನೆಗೆ ಒಂದು ಕುಟುಂಬದಿಂದ ಒಬ್ಬ ಮಹಿಳೆ ಮಾತ್ರ ಅರ್ಜಿ ಹಾಕಬಹಿಳಿದು.
5. ಅರ್ಜಿ ಹಾಕಲು ಬಯಸುವ ಮಹಿಳೆ ಈ ಹಿಂದೆ ಈ ಯೋಜನೆಗೆ ಅರ್ಜಿ ಹಾಕಿ, ಉಚಿತ ಗ್ಯಾಸ್ ಸಿಲಿಂಡರ್ ಪಡೆದಿರಾಬಾರದು.
6. ಈ ಯೋಜನೆಗೆ ಗುಡ್ಡಗಾಡು ಪ್ರದೇಶ, ಕರಾವಳಿ ಪಕ್ಕದ ಮತ್ತು ದ್ವೀಪ ಪ್ರದೇಶದಲ್ಲಿ ವಾಸಿಸುವ ಕುಟುಂಬಗಳ ಮಹಿಳೆಯರು ಅರ್ಜಿ ಹಾಕಬಹುದು.
7. ಈ ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ದೇಶದ ಯಾವುದೇ ವರ್ಗದ, ಆರ್ಥಿಕವಾಗಿ ಹಿಂದುಳಿದ, ಬಡ ಕುಟುಂಬದ ಮಹಿಳೆಯರು ಅರ್ಜಿ ಹಾಕಬಹುದು.
ಸ್ನೇಹಿತರೆ ನಿಮ್ಮ ಕುಟುಂಬದಲ್ಲಿ ಯಾವುದಾದರೂ ಮಹಿಳೆಯರಿಗೆ ಎಲ್ಲಾ ಅರ್ಹತೆಗಳನ್ನು ಹೊಂದಿದ್ದರೆ, ಇಲ್ಲಿಯವರೆಗೂ ಈ ಯೋಜನೆಗೆ ಅರ್ಜಿ ಹಾಕಿಲ್ಲ ಅಂದರೆ ಅಂತವರು ಈ ಯೋಜನೆಗೆ ಹೇಗೆ ಅರ್ಜಿ ಹಾಕಬೇಕು ಅಂತ ಕೆಳಗೆ ಕೊಟ್ಟಿರುವ ಮಹಿಯಲ್ಲತಿಯನ್ನು ನೋಡಿಕೊಂಡು ಅರ್ಜಿ ಹಾಕಬಹುದು.
ಉಚಿತ ಗ್ಯಾಸ್ ಸಿಲಿಂಡರ್ ಗೆ ಅರ್ಜಿ ಹಾಕಲು ಬೇಕಾಗುವ ದಾಖಲೆಗಳು :
ಸ್ನೇಹಿತರೆ ನಿಮ್ಮ ಕುಟುಂಬದ ಯಾವುದೇ ಮಹಿಳೆಯು ಪ್ರಧಾನ ಮಂತ್ರಿ ಉಜ್ವಲ್ ಯೋಜನೆಗೆ ಇಲ್ಲಿಯವರೆಗೆ ಅರ್ಜಿ ಹಾಕಿಲ್ಲ , ಈ ಯೋಜನೆಗೆ ಬೆಳೆದ ಎಲ್ಲಾ ಅರ್ಹತೆಗಳನ್ನು ಹೊಂದಿದ್ದರೆ ಎಂದರೆ ಕೆಳಗೆ ಕೊಟ್ಟಿರುವ ದಾಖಲೆಗಳನ್ನು ತೆಗೆದುಕೊಂಡು ಈಗಲೆ ಈ ಯೋಜನೆಗೆ ಅರ್ಜಿ ಹಾಕಿ ಯೋಜನೆಯ ಲಾಭವನ್ನು ಪಡೆಯಬಹುದು. ಯೋಜನೆಗೆ ಅರ್ಜಿ ಹಾಕಲು ಕಡ್ಡಾಯವಾಗಿ ಬೇಕಾಗುವ ದಾಖಲೆಗಳನ್ನು ಇಲ್ಲಿ ನೀಡಲಾಗಿದೆ.
•ಆಧಾರ್ ಕಾರ್ಡ್ : ಅರ್ಜಿ ಹಾಕಲು ಬಯಸುವ ಮಹಿಳೆಯ ಆಧಾರ್ ಕಾರ್ಡ್ ನಂಬರ್ ಬೇಕಾಗುತ್ತದೆ. ಆಧಾರ್ ಕಾರ್ಡ್ ಗೆ ಪೋನ್ ನಂಬರ್ ಲಿಂಕ್ ಆಗಿರಬೇಕು.
•ರೇಷನ್ ಕಾರ್ಡ್ : ಅರ್ಜಿ ಹಾಕಲು ಬಯಸುವ ಮಹಿಳೆಯ ಕುಟುಂಬದ ಪಡಿತರ ಚೀಟಿ (ration card) ಬೇಕಾಗುತ್ತದೆ.
•ಜಾತಿ ಮತ್ತು ಆದಾಯ ಪ್ರಮಾಣ ಪತ್ರ : ಅರ್ಜಿ ಹಾಕುತ್ತಿರುವ ಮಹಿಳೆಯು ಆರ್ಥಿಕವಾಗಿ ಹಿಂದುಳಿದ, ಬಡ ಕುಟುಂಬಕ್ಕೆ ಸೇರಿದ್ದಾಳೆ ಎಂದು ಗುರುತಿಸಲು, ಆ ಮಹಿಳೆಯ ಆದಾಯ ಪ್ರಮಾಣ ಪತ್ರ ಬೇಕಾಗುತ್ತದೆ.
•ಬ್ಯಾಂಕ್ ಪಾಸ್ ಬುಕ್ : ಅರ್ಜಿ ಹಾಕುತ್ತಿರುವ ಮಹಿಳೆಯು ಮುಂದೆ ಸಬ್ಸಿಡಿ ನೀಡುವ ಹಣವನ್ನು ಪಡೆಯಲು ತನ್ನ ಬ್ಯಾಂಕ್ ಪಾಸ್ ಬುಕ್ ನೀಡಬೇಕಾಗುತ್ತದೆ.
•ವಾಸಸ್ಥಳ ಪ್ರಮಾಣ ಪತ್ರ : ಅರ್ಜಿ ಹಾಕುತ್ತಿರುವ ಮಹಿಳೆಯು ಭಾರತಕ್ಕೆ ಸೇರಿದ ಮಹಿಳೆ ಮತ್ತು ಭಾರತದಲ್ಲಿ ವಾಸಿಸುತ್ತಿರುವ ಮಹಿಳೆ ಎಂದು ಗುರುತಿಸಲು ವಾಸಸ್ಥಳ ಪ್ರಮಾಣ ಪತ್ರ ನೀಡಬೇಕಾಗುತ್ತದೆ.
ಪ್ರಧಾನ ಮಂತ್ರಿ ಉಜ್ವಲ್ ಯೋಜನೆಗೆ ಅರ್ಜಿ ಹೇಗೆ ಹಾಕುವುದು?
ಸ್ನೇಹಿತರೆ ನಿಮ್ಮ ಕುಟುಂಬದಲ್ಲಿ ಇಲ್ಲಿಯವರೆಗೂ ಪ್ರಧಾನಮಂತ್ರಿ ಉಜ್ವಲ್ ಯೋಜನೆಗೆ ಯಾರು ಅರ್ಜಿ ಹಾಕಿಲ್ಲ ಮತ್ತು ಮೇಲೆ ನೀಡಿದ ಈ ಯೋಜನೆಗೆ ಬೇಕಾದ ಅರ್ಹತೆಗಳು ಹಾಗೂ ದಾಖಲಾತಿಗಳನ್ನು ಹೊಂದಿದ್ದಾರೆ ಅಂದರೆ ಈ ಕೆಳಗೆ ನೀಡಿದ ಉಜ್ವಲ ಯೋಜನೆಯ ಅಧಿಕೃತ ಲಿಂಕ್ ಮೇಲೆ ಒತ್ತಿ, ಅಲ್ಲಿ ನಿಮ್ಮ ಹೆಸರು ನೋಂದಣಿ ಮಾಡಿಕೊಂಡು ಉಚಿತ ಗ್ಯಾಸ್ ಸಿಲಿಂಡರ್ ಗೆ ಅರ್ಜಿ ಹಾಕಿ ಯೋಜನೆಯ ಲಾಭ ಪಡೆಯಿರಿ.
ಗ್ಯಾಸ್ ಸಿಲಿಂಡರ್ ಗೆ ಅರ್ಜಿ ಹಾಕಲು ಇಲ್ಲಿ ಒತ್ತಿ.
ಸ್ನೇಹಿತರೆ ಈ ಮೇಲೆ ನೀಡಿದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಧಿಕೃತ ಲಿಂಕ್ ಮೇಲೆ ಒತ್ತಿ. ನಂತರ ಅಲ್ಲಿ ನೀಡಲಾಗಿರುವ ಏಜೆನ್ಸಿ ಅಲ್ಲಿ, ನಿಮಗೆ ಬೇಕಾದ ಏಜೆನ್ಸಿ ಆಯ್ಕೆ ಮಾಡಿಕೊಳ್ಳಿ. ನಂತರ ಅಲ್ಲಿ ಕೇಳಲಾಗುವ ಅರ್ಜಿ ಹಾಕುತ್ತಿರುವ ಮಹಿಳೆಯ ಎಲ್ಲಾ ದಾಖಲೆಗಳನ್ನು ಭರ್ತಿ ಮಾಡಿ ಯೋಜನೆಗೆ ಅರ್ಜಿ ಹಾಕಿ ಯೋಜನೆಯ ಮೂಲಕ ಉಚಿತವಾಗಿ ಗ್ಯಾಸ್ ಸಿಲಿಂಡರ್, ಸ್ಟವ್ ಮತ್ತು ಸಬ್ಸಿಡಿ ಹಣವನ್ನು ಪಡೆಯಿರಿ.
ಸ್ನೇಹಿತರೆ ಇನ್ನು ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಯಾರು ಅರ್ಜಿ ಹಾಕಿಲ್ಲ ಅವರು ಈ ಮೇಲಿನ ಮಾಹಿತಿಯನ್ನು ನೋಡಿಕೊಂಡು ಯೋಜನೆಗೆ ಅರ್ಜಿ ಹಾಕಿ ಯೋಜನೆಯ ಲಾಭವನ್ನು ಪಡೆಯಿರಿ. ಈ ಲೇಖನದಲ್ಲಿ ಪ್ರಧಾನ ಮಂತ್ರಿ ಉಜ್ವಲ್ ಯೋಜನೆಗೆ ಹೇಗೆ ಅರ್ಜಿ ಹಾಕಿ ಉಚಿತವಾಗಿ ಗ್ಯಾಸ್ ಸಿಲಿಂಡರ್ ಪಡೆಯಬೇಕು ಅನ್ನುವ ಮಾಹಿತಿ ತಿಳಿಸಿದ್ದೇನೆ ಎಂದು ಭಾವಿಸುತ್ತೇನೆ. ಧನ್ಯವಾದಗಳು..
ಪ್ರತಿ ದಿನದ ಪ್ರಚಲಿತ ಸುದ್ದಿಗಳ, ಸರ್ಕಾರದ ಯೋಜನೆಗಳ, ಕಾಂಗ್ರೆಸ್ ಗ್ಯಾರಂಟೀ ಗಳಾದ ಗೃಹ ಲಕ್ಷ್ಮಿ ಯೋಜನೆ & ಶಕ್ತಿ ಯೋಜನೆಗಳ, ಇದರ ಜೊತೆಗೆ ರೈತರಿಗೆ ಸರ್ಕಾರ ನೀಡುವ ಬೆಳೆ ಪರಿಹಾರದ ಯೋಜನೆ ಕುರಿತು, ಬೆಳೆ ಸಾಲ ಮನ್ನಾ ಯೋಜನೆ, ಪಿಎಂ ಕಿಸಾನ್ ಯೋಜನೆ ಕುರಿತು, ಬೆಳೆ ವಿಮೆ ನೋಂದಣಿ ಮಾಡಿಕೊಳ್ಳುವ ಕುರಿತು ಮತ್ತು ಸರ್ಕಾರ ರೈತರಿಗೆ ನೀಡುವ ಬಿತ್ತನೆ ಬೀಜ, ರಸಗೊಬ್ಬರ, ರೈತರು ಉಳುಮೆಗೆ ಬಳಸುವ ಉಪಕರಣಗಳ ಸಬ್ಸಿಡಿಯ ಬಗ್ಗೆ ಮಾಹಿತಿ ನಿಮಗೆ ತಿಳಿಸುತ್ತೇವೆ.